ದೇವರೆಲ್ಲಿದ್ದಾನೆ? ಇದು ಬಹಳ ಜನರ ಅದರಲ್ಲೂ ಇತ್ತೀಚಿನ ಪಿಳಿಗೆಯವರಿಂದ ಕೇಳಿಬರುತ್ತಿರುವ ಪ್ರಶ್ನೆ. ಕಂಪ್ಯೂಟರ್ ಯುಗದಲ್ಲಿ ಕಣ್ಣುಬಿಡುತ್ತಿರುವ ಯುವ ಪೀಳಿಗೆಗೆ ದೇವರು,ಧರ್ಮ,ನಂಬಿಕೆಗಳು ಇವೆಲ್ಲ ಅರ್ಥಹೀನವಾಗಿ ಕಾಣುತ್ತವೆ. ಎಲ್ಲಿದ್ದಾನೆ ನಿಮ್ಮ ದೇವರು? ಇರುವುದೆ ಆದರೆ ಯಾಕೆ ಅವನು ನಮಗೆ ಕಾಣುವುದಿಲ್ಲ? ನೀನು ಹೇಳುವ ಮಾತನ್ನು ನಾನು ಹೇಗೆ ನಂಬಬೇಕು? ದೇವರನ್ನು ಕರೆದುತಂದು ನನ್ನ ಎದುರಿಗೆ ನಿಲ್ಲಿಸಲು ಸಾಧ್ಯವಾ ಹೇಳು? ಆಗ ನಾನು ನಿನ್ನ ಮಾತನ್ನು ನಂಬುತ್ತೇನೆ. ಇದು ಸಾಮಾನ್ಯವಾಗಿ ಎಲ್ಲ ನಾಸ್ತಿಕರೂ ಕೇಳುವ ಪ್ರಶ್ನೆ. ಇವರು ಕೇಳಿದ ಮಾತ್ರಕ್ಕೆ , ಇವರಿಗೆ ಇರುವ ಸಂದೇಹವನ್ನು ದೂರಮಾಡಲು ದೇವರು ಇವರ ಎದುರಿಗೆ ಬಂದು ತನ ಅಸ್ತಿತ್ವವನ್ನು ನಿರೂಪಿಸಿಕೊಳ್ಳಬೇಕು. ದೇವರು ಯಾರೂ ತನ್ನನು ನಂಬಲಿ ಎಂದು ಹೇಳಿಲ್ಲ, ನಂಬದವರನ್ನು ದೂರಮಾಡಿಲ್ಲ.ಆದರೆ ಅವನನ್ನು ನೋದುವ ಕಣ್ಣುಗಳನ್ನು ಬೆಳೆಸಿಕೊಳ್ಳಬೇಕು ಅಷ್ಟೆ.
ಈ ಕೆಳಗೆ ನನ್ನ ಜೀವನದ ಕೆಲವು ಅನುಭವಗಳನ್ನು ನಿರೂಪಿಸಿದ್ದೇನೆ, ಇವುಗಳನ್ನು ಓದಿನೋಡಿ ನಂತರ ನೀವೆ ನಿರ್ಣಯಿಸಿಕೊಳ್ಳಿ , ದೇವರು ಇದ್ದಾನೋ ಇಲ್ಲವೋ....ಅಲ್ಲದೆ ಜೀವನದಲ್ಲಿ ನಡೆಯವ ಯಾವ ಘಟನೆಯೂ ಸುಮ್ಮನೆ ಜರುಗುವುದಿಲ್ಲ. ಅದಕ್ಕೆ ಏನಾದರು ಓಮ್ದು ಕಾರಣವಿರುತ್ತದೆ.
ನಾನು ಇಲ್ಲಿ ಕೊಡುವ ಅನುಭವಗಳು ಯಾವ ಕ್ರಮವನ್ನೂ ಅನುಸರಿಸಿ ಬರೆದವಲ್ಲ. ಹೇಗೆ ಹೇಗೆ ಅನುಭವಗಳು ನೆನಪಿಗೆ ಬರುತ್ತವೆಯೋ ಹಾಗೆ ಹಾಗೆ ಅವಗಳನ್ನು ನಿಮ್ಮ ಮುಂದೆ ಇರಿಸಿದ್ದೇನೆ.ಇವುಗಳು ಬೇರೆಯವರಿಗೆ ಮಹತ್ವಪೂರ್ಣವಾಗಿ ಇವೆಯೋ ಇಲ್ಲವೋ ನನ್ನಗೆ ಅತ್ಯಂತ ಮಹತ್ವವುಳ್ಳದ್ದಾಗಿವೆ.